ಇದೇ ಪಾಲಿಸಿದೆಪಾಲಿಸಿದೆಪಾಲಿಸಯ್ಯ gopala dasaru ide palisidepaliside palisayya

 Restart mobile & try if the above audio is not playing

ಶ್ರೀಶ್ರೀಗೋಪಾಲದಾಸರ ಕೃತಿ

ರಾಗ : ಆರಭಿ    ಆದಿತಾಳ


ಇದೇ ಪಾಲಿಸಿದೆಪಾಲಿಸಿದೆಪಾಲಿಸಯ್ಯ

ಪದುಮ ಸಂಭವ ಪಿತನೆ ಪದೋಪದಿಗೆ ಎಮಗಿಂದು ||pa||


ಜೀವ ಅಸ್ವಾತಂತ್ರ್ಯ ದೇವ ನಿಜ ಸ್ವಾತಂತ್ರ್ಯ

ಜೀವ ಜಡರೆಲ್ಲ ದೇವರಾಧೀನವೆಂದು|

ಜೀವೋತ್ತಮರಲಿ ಭಕುತಿ ಜಡದಲ್ಲಿ ವಿರಕುತಿ

ಕಾವ ಕೊಲ್ಲುವುದೆಲ್ಲ ಶ್ರೀಹರಿ ಎಂಬ ಜ್ಞಾನ ||1||


ಬಿಂಬ ಚಲಿಸಿದರೆ ಪ್ರತಿಬಿಂಬ ಚಲಿಸುವುದು

ಬಿಂಬ ಪೂರ್ಣನು ಪ್ರತಿಬಿಂಬನು ಅಲ್ಪ|

ಉಂಬುಡುವ ಕ್ರಿಯೆಗಳನು ಬಿಂಬ ಮಾಡಿಸಲು

ಪ್ರತಿಬಿಂಬಾಖ್ಯವುಂಟೆಂಬ ಬಿಂಬಾಕ್ರಿಯವು ಎನಗೆ ||2||


ಬಂಧನಾ ನಿವೃತ್ತಿಯು ಎಂದಿಗೋ ಎನಗೆಂದು

ಸಂದೇಹದಿಂದ ನಾ ಕೇಳಲಿಲ್ಲ|

ಸುಂದರಮೂರುತಿ ಗೋಪಾಲವಿಠ್ಠಲ

ಕುಂದಿಲ್ಲದಲೆ ಎನಗೆ ನವವಿಧ ಭಕುತಿಯ ||3||

** 

Comments