ಗೋದಾ ಎನ್ನೊಳು ವಿನೋದದಿಂದ ಮಾತಾಡಿ harapanahalli bheemavva goda ennolu vinodadinda


 
Restart mobile & try if the above audio is not playing

ಹರಪ್ಪನಹಳ್ಳಿ ಭೀಮವ್ವನವರ ಕೃತಿ

ಗೋದಾವರಿ ನದಿಯ ಸ್ತೋತ್ರ ಪದ

ರಾಗ : ಚಾರುಕೇಶಿ  ಆದಿತಾಳ


ಗೋದಾ ಎನ್ನೊಳು ವಿನೋದದಿಂದ

ಮಾತಾಡಿ ತೋರಿಸೆ ನಿನ್ನ ಪಾದ ||pa||


ಸಾಧು ಸಜ್ಜನರಿಗೆ ಸ್ನಾನದಫಲ ಕೊಟ್ಟು

ಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ ||1||


ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆ

ಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ ||2||


ದೂರದಿ ಬಂದೆ ನಾ ಗೋದಾವರಿಯೆ ನೀನು

ತೋರೆ ಭೀಮೇಶಕೃಷ್ಣನ್ನೂರು ದಾರಿಗಳ ||3|

**

Comments