ಗಜವದನ ಪಾವನ ವಿಘ್ನನಾಶನ gopaladasaru gajavadana pavana vighnanashana

Restart mobile & try if the above audio is not playing


ಶ್ರೀಗೋಪಾಲದಾಸರ ಕೃತಿ

ರಾಗ : ಬೃಂದಾವನಸಾರಂಗ    ಆದಿತಾಳ

ಗಜವದನ ಪಾವನ ವಿಘ್ನನಾಶನ ||ಪ||

ವರ ಪಾಶಾಂಕುಶಧರ ಪರಮದಯಾಳೊ
ಕರುಣಾಪೂರಿತ ಗೌರೀವರಕುಮಾರನೆ ॥೧॥

ಸುಂದರವದನ ಅರವಿಂದನಯನ 
ಘನ-ಸುಂದರಿ ಕಂದನೆ ಬಂದು ರಕ್ಷಿಸೊ ॥೨॥

ಗೋಪಾಲವಿಠಲನ ಅಪಾರ ಭಜಕನೆ
ಶಾಪಾನುಗ್ರಹಶಕ್ತಾನೇಕ ಮಹಿಮಾ ॥೩॥
**

Comments