ಪರಮ ಮಂಗಳ ಮೂರ್ತಿ vijaya dasaru parama mangala murthy

Restart mobile & try if the above audio is not playing

ಶ್ರೀ ಶ್ರೀವಿಜಯದಾಸರ ಕೃತಿ

ರಾಗ : ಸುರುಟಿ   ಆದಿತಾಳ


ಪರಮ ಮ೦ಗಳ ಮೂರ್ತಿ – ದಿವ್ಯ ಕೀರುತಿ

ಧರೆಯೊಳಗಿದೆ ವಾರುತಿ ಗುರುವೆ  || ಪ ||


ಕರುಣಾಪಯೋನಿಧಿ ಕರವ ಪಿಡಿದು ಎನ್ನ

ಕರುಣಶುಧ್ಧನ ಮಾಡೊ ಕರೆವೆ ಮಸ್ತಕ ಬಾಗಿ    || ೧ ||


ರಾಘವೇ೦ದ್ರರ ಪಾದ ಲಾಘವಮತಿಯಲ್ಲಿ

ಶ್ಲಾಘನ ಮಾಡಿದ ಮಾಗಧಾರಿಯಪ್ರೀಯ        || ೨ ||


ನಿರುತ ಮ೦ತ್ರಾಲಯ ಪುರವಾಸ ಅಘನಾಶ

ಸಿರಿ ವಿಜಯವಿಠ್ಠಲನ್ನ ಚರಣ ಭಜಿಪ ಗುರುವೆ    || ೩ ||

**

Comments