ಕಮಲಾಲಯೇ ಕೊಲ್ಲಾಪುರ ನಿಲಯೆ prasannavenkata dasaru kamalalaye kollapura nilaye

Restart mobile & try if the above audio is not playing

ಕೊಲ್ಹಾಪುರ ಶ್ರೀಮಹಾಲಕ್ಷ್ಮಿಯ ಸ್ತುತಿ ಪದ

ರಾಗ : ಶಹನ    ಆದಿತಾಳ


ಕಮಲಾಲಯೆ ಕೊಲ್ಹಾಪುರ ನಿಲಯೆ |

 ಶ್ರೀಮಹಾಲಕುಮಿ ದೇವಿಯೆ  ॥ಪ॥


ನಮಿಪೆ ನಿನ್ನ ಪದಕಮಲಕನುದಿನ | 

ಕಮಲನಾಭನ್ನ ತೋರಿಸಮ್ಮಾ   ॥ಅ.ಪ॥


ಕಮಲಗಂಧಿಯೆ ಕೋಮಲಾಂಗಿಯೆ । 

ಬ್ರಹ್ಮಾದಿಗಳಿಂದೊಂದಿತೆ ನಿತ್ಯ ಮುಕ್ತೆ ।

ಸುಮನಂತ ಹರಿಯ ಅನಂತ ಗುಣಂಗಳ | 

ನೇಮದಿಂನೆನೆವ ಸದಾನಂದ ವದನಳೆ   ॥೧॥


ಅರಿಷಿಣ ಕುಂಕುಮ ಚಂದನ ಲೇಪಿತೆ | 

ಸಿರಿ ಸುಖ ಸಂಪತ್ತು ಸೌಭಾಗ್ಯದಾತೆ | 

ಅರಿತು ನಿನ್ನ ಪತಿಆರಾಧಿಸಲು | 

ಸರಿ ಮನ ಕೊಡು ಸಿರಿವರಾಗ್ರಹ ಸದನೆ ॥೨॥


ಅಂದುಗೆಯಾದಿ ಅಲಂಕಾರ ಚೆಂದಳೆ | 

ಮಂದಸ್ಮಿತೆ ಮಹಾಮಂದಿರೆ ಇಂದಿರೆ | 

ವಂದಿಪ ಭಕುತರ ಆನಂದದಾತೆ ಮಹಾ- 

ನಂದ ಪ್ರಸನ್ವೆಂಕಟನ್ನ ರಾಣಿಯೆ ॥3॥

**


Comments