ಹನುಮಂತ ದೇವಗೆ ನಮೋ ನಮೋ purandara dasaru hanumanta devage namo namo

Restart mobile & try if the above audio is not playing

ಶ್ರೀ ಪುರಂದರ ದಾಸರು

ರಾಗ ಶ್ರೀರಂಜನಿ     ಆದಿತಾಳ 


ಹನುಮಂತ ದೇವಗೆ ನಮೋ ನಮೋ

ಹನುಮಂತ ದೇವಗೆ ನಮೋ ನಮೋ 

ವನದಯನು ದಾಟಿ ದಾನವರ ದಂಡಿಸಿದ 

ಚರಣಗಳು 

ಹೇಮಕುಂಡಲ ಹೇ ಯಜ್ಞೋಪವೀತ ಥರ

ಹೇಮಕಟಿ ಸೂತ್ರ ಕೌಪಿನವನು ಧರಿಸಿ 

ಹೇಮರೋಮಕೆ ಕೋಟಿ ಲಿಂಗ

ಸರ್ವಾಂಗ ರಾಮ ಮೃತ್ಯುನೆ ನಿನಗೆ ಸರಿಯಾರು ಗುರುವೇ ।೧।


ರಾಮ ಲಕ್ಷ್ಮಣರ ಕಟಾಳಾಗಿ ನೀ ನಡೆದೆ

ಭೂಮಿಜೆಗೆ ಮುದ್ರೆ ಉಂಗುರವನಿತ್ತೆ 

ಆ ಮಹಾ ಲಂಕಾನಗರವ ನೀ ಧೂಮ ದಾಮನ  ಮಾಡಿ 

ಮೆರೆದ ಮಹಾತ್ಮನು ನೀನೇ ಮಹಾನುಭಾವ ।೨।


ಶ್ರೀಮದಾಚಾರ್ಯರ ಪುರಪತಿ ಎಂದೇನಿಪ

ಶ್ರೀಮಹಾಲಕುಮಿ ಮಹಾ ನಾರಾಯಣ ರೂಪ

ಶ್ರೀಮನೋಹರ ಪುರಂದರ ವಿಠಲನ

ಪ್ರೇಮದಾಳು ಹನುಮಂತ ಬಲವಂತ ।೩।

** 


Comments