ರಾಘವೇಂದ್ರ ಮುನಿರಾಯರ ಸ್ಮರಣೆ prasannavenkata dasaru raghavendra munirayara smarane

Restart mobile & try if the above audio is not playing

ಶ್ರೀ ಪ್ರಸನ್ನವೇಂಕಟ ದಾಸರು 

ರಾಗ ಅಠಾಣ    ಅದಿತಾಳ 


ರಾಘವೇಂದ್ರ ಮುನಿರಾಯರ ಸ್ಮರಣೆ ।

ಜಾಗಿಲ್ಲದೆ ಮಾಡಿ ನೀಗೊ ಬವಣೆ ।। ಪಲ್ಲವಿ ।।


ಹಿಂದಿನ ಮೂರು ಜನ್ಮಗಳಲ್ಲೂ ।

ಇಂದಿರೇಶನನು ವಲಿಸಿ ಮೆರೆದು ಬಲು ।

ಕುಂದಿಲ್ಲದ ಪುಣ್ಯಗಳಿಸಿ ಸುರತರು ।

ಮಂದ ಭಾಗ್ಯರಿಗೆ ಹಂಚುತಲಿಹರು ।। ಚರಣ ।।


ಭೂತ ಪ್ರೇತ ಸಕಲಾದಿ ಶಕುನಭಯ ।

ಘಾತಚಕ್ರ ಜಾತಕದ ಪೀಡೆಗಳು ।

ಗತಿಸುವವೀ ಯತಿ ಕರುಣೆ ತೋರಲು ।

ನಿತ್ಯ ತುತಿಸೆ ನಿಜ ಮುಕುತಿ ನಿಶ್ಚಿತವು ।। ಚರಣ ।।


ಕಲಿಬಲ ಹೆಚ್ಚಿ ನಲುಗಿದ ಜನಕೆ ।

ಸುಲಭದ ಮುಕುತಿ ದಾರಿಲಿ ನಿಲ್ಲಿಸಿ ।

ನಲಿಲನಾಭ ಶ್ರೀ ಪ್ರಸನ್ವೇ೦ಕಟನಾಜ್ಞೆಲಿ ।

ಸುಲಲಿತ ಮಹಿಮೆ ತೋರಿ ನಲಿವ ಗುರು ।। ಚರಣ ।।

**



Comments