ಶ್ರೀನಿವಾಸನು ಒಲಿಯನು ಕೇಳೋ purandara dasaru srinivasanu oliyo kelo


 Restart mobile & try if the above audio is not playing

ಶ್ರೀಪುರಂದರದಾಸರ ಕೃತಿ

ರಾಗ : ರೀತಿಗೌಳ     ಆದಿತಾಳ 


ಶ್ರೀನಿವಾಸನು ಒಲಿಯನು ಕೇಳೋ

ಜ್ಞಾನೋಪಾರ್ಜನೆ ಮಾಡದಲೆ  ॥ಪ॥


ಏನೇನೋ ಸತ್ಕರ್ಮವ ಮಾಡಲು

ಪ್ರಾಣೇಶಾರ್ಪಣವೆನ್ನದಲೆ    ॥ಅ.ಪ॥


ಸ್ನಾನವು ಸಂಧ್ಯಾವಂದನ ಜಪ ತಪ

ಜ್ಞಾನ ಸಾಧನವಿದೆನ್ನದಲೆ

ದಾನ ಧರ್ಮಗಳು ಈಶನ ಅನು-

ಸಂಧಾನವ ಮಾಡಿ ಮಾಡದಲೆ

॥೧॥


ಸಾಧು ಸಂಗದಲಿ ತೀರ್ಥಯಾತ್ರೆಗಳ

ಪಾದದಿ ನಡೆದು ನೀ ಮಾಡದಲೆ

ಭೇದಪಂಚಕವು ಜಗದಿ ಅಭೇದವ

ಮಾಧವನಲಿ ನೀ ತಿಳಿಯದಲೆ

॥೨॥


ಒಂದು ಕ್ಷಣವು ಬಿಡದಿಂದಿರೇಶ

ಗೋವಿಂದನಂಘ್ರಿಯ ನೀ ನೆನೆಯದಲೆ

ವಂದ್ಯನೂ ಶ್ರೀ ಪುರಂದರವಿಠಲ

ಬಂಧಕಮೋಚಕನೆನ್ನದಲೆ

॥೩॥

Comments