ಧನ್ಯನಾದೆ ವಿಠಲನ ಕಂಡು jagannatha dasaru dhanyanade vitalana kandu


 Restart mobile & try if the above audio is not playing

ಶ್ರೀಜಗನ್ನಾಥದಾಸರ ಕೃತಿ

ರಾಗ : ಪೂರ್ವಿಕಲ್ಯಾಣಿ   ಆದಿತಾಳ


ಧನ್ಯನಾದೆ ವಿಠಲನ ಕಂಡು||ಪ||   

                  

ಧನ್ಯನಾದೆ ಕಾಮನ್ನಪಿತ ಲಾ

ವಣ್ಯ ಮೂರ್ತಿಯ ಕಣ್ಣಲ್ಲಿ ಕಂಡು||ಅ.ಪ||


ದೇವವರೇಣ್ಯ ಸದಾವಿನೋದಿ ವೃಂ

ದಾವನಸಂಚರ ಗೋಪನ ಕಂಡು||೧||                 


ಮಂಗಳಾಂಗ ಕಾಳಿಂಗಮರ್ದನ ಮಾ

ತಂಗವರದ ವರ ರಂಗನ ಕಂಡು ||೨||                 


ಹಾಟಕಾಂಬರ ಕಿರೀಟಸಾರಥಿ

ತಾಟಾಕಾರಿ ವೈರಾಟನ ಕಂಡು||೩||                    


ಚಿಂತಿತಫಲದ ಕೃತಾಂತನಾತ್ಮಜ

ಆದ್ಯಂತರಹಿತ ನಿಶ್ಚಿಂತನ ಕಂಡು ||೪||                    


ಮಾತುಳಾಂತಕ ವಿಧಾತಪಿತ ಜಗ

ನ್ನಾಥವಿಠಲ ವಿಖ್ಯಾತನ ಕಂಡು||೫||

***

Comments