ದಯಕಿಂತ ಗುಣವಿಲ್ಲ ನರಗೆ vidyaprasanna teertharu dayakinta gunavilla narage
Restart mobile & try if the above audio is not playing
ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ
ರಾಗ : ಚಾರುಕೇಶಿ ಆದಿತಾಳ
ದಯಕಿಂತ ಗುಣವಿಲ್ಲ ನರಗೆ
ದಯಕೆ ನಿರ್ಬಂಧವಿಲ್ಲಣ್ಣ ಜಗದಿ ॥ಪ॥
ಹೃದಯ ಮಂದಿರದಲಿ ನೆಲೆಸಿಹ ದಯೆಯು
ಮೃದು ಮಳೆಹನಿ ತೆರದಲಿ ಸುರಿಯುವುದು ॥ಅ.ಪ॥
ಬಾರಿಯ ಸ್ಥಾನಕೆ ಈ ದಯೆ ಗುಣವು
ಭಾರಿಯ ಶಕುತಿಯ ನೀಡುವುದು
ಚಾರು ಕಿರೀಟವ ಮೀರಿದ ಕಾಂತಿಯ
ಬೀರುವುದೀ ದಯೆ ನರಪತಿಗೆ
॥೧॥
ರಾಜನ ದಂಡವ ನೋಡುತ ನೋಡುತ
ಈ ಜಗವೆಲ್ಲವು ನಡುಗುವುದು
ರಾಜನ ಕಾರ್ಯಗಳೆಲ್ಲಕೆ ದೈವಿಕ
ತೇಜವ ಕೊಡುವುದು ದಯೆ ಗುಣವು ॥೨॥
ನಶ್ವರವೆಲ್ಲವು ಪ್ರಾಕೃತವು
ಈಶ್ವರ ಧರ್ಮವೆ ಈ ದಯೆಯು
ಶಾಶ್ವತ ಧರ್ಮಗಳೆಲ್ಲವು ದಯದಿ
ಮಿಶ್ರಿತವಾದರೆ ಸುಖಮಯವು ॥೩॥
ಪರಮ ಪುರುಷ ದಯೆ ತೋರದಿರೆ
ವರಗತಿ ಪಡೆಯಲು ನರಗಳವೆ
ಕರುಣೆ ಪ್ರಸನ್ನನ ಮೊರೆ ಹೋಗದೆ ನೀ
ಅರಿಯಲು ಸಾಧ್ಯವೆ ಕರುಣೆಯ ಬೆಲೆಯ ॥೪॥
**
.jpeg)
Comments
Post a Comment